Limited Edition - Rare Collectable Silver Coins of Namadev Simpi Samaj🙏 ಶ್ರೀ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ ಪಾದಾರವಿಂದಗಳಿಗೆ ವಂದನೆಗಳು 🙏
ನಾಮದೇವ ಸಿಂಪಿ ಸಮಾಜದ ಪ್ರಿಯ ಬಾಂಧವರೇ, ನಿಮಗೆಲ್ಲರಿಗೂ ಮುಂಬರುವ ಹೊಸ ವರ್ಷ –2026 ಹಾಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು ನೂತನ ವರ್ಷದ ಹೊಸ್ತಿಲಲ್ಲಿರುವ ಈ ಶುಭ ಸಂದರ್ಭದಲ್ಲಿ ಭಕ್ತಿ ಮಾತ್ರದಿಂದಲೇ ಶ್ರೀಹರಿಯನ್ನು ಒಲಿಸಿಕೊಳ್ಳಬಹುದೆಂದು ಜಗತ್ತಿಗೆ ಸಾರಿ ಆ ಪಾಂಡುರಂಗನ ಮೇಲೆ ಅನನ್ಯ ಭಕ್ತಿ ಭಾವದಿಂದ ಸಾವಿರಾರು ಅಭಂಗ ಗಳನ್ನು ರಚಿಸಿ ಆ ಪಾಂಡುರಂಗನನ್ನು ಒಲಿಸಿಕೊಂಡು ಭಕ್ತಿ, ತ್ಯಾಗ ಮತ್ತು ಸೇವೆಯ ಮೂಲಕ ಶ್ರೀ ಹರಿಯ ಕೃಪೆಗೆ ಪಾತ್ರರಾಗಬಹುದು ಎಂದು ನಮಗೆಲ್ಲ ದಾರಿಯನ್ನು ತೋರಿಸಿ ದಾರಿದೀಪವಾಗಿರುವ ಶ್ರೀ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ ಸ್ಮರಣಾರ್ಥವಾಗಿ, ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ, ಬೆಂಗಳೂರು ಇವರ ವತಿಯಿಂದ *ಪವಿತ್ರ ಬೆಳ್ಳಿ ನಾಣ್ಯವನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ನಾಣ್ಯ ಕೇವಲ ಬೆಳ್ಳಿ ನಾಣ್ಯವಾಗಿರದೆ… ಇದು ನಮ್ಮ ಸಂಸ್ಕೃತಿ, ಸಂಸ್ಕಾರ, ನಮ್ಮ ಸಮಾಜದ ಏಕತೆ ಮತ್ತು ಗುರು ಪರಂಪರೆಯ ಪ್ರತೀಕವಾಗಿರುತ್ತದೆ. ರಾಜ್ಯಾದ್ಯಂತ ನೆಲೆಸಿರುವ ಪ್ರತಿ ನಾಮದೇವ ಸಿಂಪಿ ಸಮಾಜ ಬಾಂಧವರು ಈ ಪವಿತ್ರ ನಾಣ್ಯವನ್ನು ಪಡೆದು ಪೂಜಾ ಸ್ಥಳದಲ್ಲಿ ಇಟ್ಟು ದಿನವೂ ಪೂಜಿಸಿ ಹೊಸ ವರ್ಷದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಲಿ ಹಾಗೂ ನಾಮದೇವ ಮಹಾರಾಜರ ಆಶೀರ್ವಾದ ಮತ್ತು ಶ್ರೀ ಹರಿಯ ಕೃಪೆಗೆ ಪಾತ್ರರಾಗಲಿ ಎಂದು ಹಾರೈಸುತ್ತೇವೆ. 🙏 ⏳ ಈ ವಿಶೇಷ ಬೆಳ್ಳಿ ನಾಣ್ಯವು ಸೀಮಿತ ಪ್ರಮಾಣದಲ್ಲಿ ಲಭ್ಯವಿದ್ದು ಆದ್ಯತೆಯ ಮೇರೆಗೆ ನೀಡಲಾಗುವುದು. ಸಮಾಜ ಬಾಂಧವರು ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿ. 📞 ಬುಕ್ಕಿಂಗ್ ಮತ್ತು ವಿವರಗಳಿಗಾಗಿ ಸಂಪರ್ಕಿಸಿ: 📱 9845662230 | 9538326471 | 8861124279 🙏 *ಶ್ರೀ ನಾಮದೇವ ಮಹಾರಾಜರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವ ಯುವ ಘಟಕ ಬೆಂಗಳೂರು 🙏 Matrimonial e-platform
Bengaluru Namadev Simpi Yuva Ghataka ( NSSYGB) in coordination with Namadev Simpi Samaj Bengaluru had launched Matrimonial e-platform on 6th June 2021 in the presence of various Namadev Simpi Community people from all over the world. Please make use of this platform.
|
Total Visitors :


